ಭಾನುವಾರ, ಮೇ 29, 2011

ಮುಖವಾಡದೊಳಗೆ ನಾನೋ...ನನ್ನೊಳಗೆ ಮುಖವಾಡವೋ

ಸುಮಾರು ಹನ್ನೆರಡು ವರ್ಷಗಳಿಂದ ನನ್ನೊಡನಿರುವ ಗೊಂಬೆ...ಕೆಲವು ವರ್ಷಗಳಿಂದ ನೂರು ರೂ.ಗಳನ್ನು ಇದರಿಂದ ಸಂಪಾದಿಸುತ್ತಿದ್ದವನು ....ಇಂದು ಇದರಿಂದ 300 ರಿಂದ 700 ರೂ.ಗಳವರೆಗೆ ಸಂಪಾದಿಸುತ್ತೇನೆ...ಮುಖವಾಡ ಧರಿಸಿ ಎಲ್ಲರನ್ನು ನಗಿಸುವ ಕಾಯಕ ನಂದು....ಮುಖವಾಡದೊಳಗೆ ನಗುವು ನಂದೆ..

ಸೋಮವಾರ, ಮೇ 23, 2011

ಸೆಕೆಂಡ್ ಬಿ.ಎ ಆಯ್ತು ಮುಂದೇನು?

ನಾವು ಎಸ್.ಎಸ್.ಎಲ್.ಸಿ. ,ಪಿ.ಯು.ಸಿ ಆದ್ ಮೇಲೆ ಮುಂದೇನು ಮಾಡ್ಬೇಕು ಎಂಬುದನ್ನು ನೀವು ಕೇಳಿದ್ದೇವೆ. ಈ ಮನುಷ್ಯನಿಗೆ ಸರಿಯಿಲ್ಲವೂ? ಎಂದು ನಿಮಗೆ ಅನ್ನಿಸಬಹುದು, ಸೆಕೆಂಡ್ ಆದ್ರೆ ಇನ್ನು ಫೈನಲ್ ಇಯರ್ ಪಾಸ್ ಮಾಡು ಮಾರಾಯ ಅಂತನ್ನೂ ನೀವು ಹೇಳ ಬಹುದು.....ನನ್ನ ಕಾಡುತ್ತಿರುವ ಪ್ರಶ್ನೆ ಒಂದೇ 'ಡಿಗ್ರಿ ಆದ್ ಮೇಲೆ ಏನು? ಅಂತ
ಪಾಪಾ ಹುಡುಗ ಬಿ.ಎ ತೆಗೊಂಡು ಸೋತು ಹೋದ ಎಂದು ನೀವು ಯೋಚಿಸಿದ್ದರೆ ಅದು ಖಂಡಿತ ತಪ್ಪು.
ಅವಕಾಶಗಳನ್ನು ಉಪಯೋಗಿಸಿದರೇ ಅವಕಾಶ ಮೇಲೆ ಅವಕಾಶ ಬರುತ್ತೆ ಎನ್ನುವುದಕ್ಕೆ ನಾನೇ ಸಾಕ್ಷಿ
ಅದರಿಂದ ಬಂದ ಅವಕಾಶದಲ್ಲಿ ಯಾವುದನ್ನು ಉಪಯೋಗಿಸಲಿ ಎಂಬುದರ ಬಗ್ಗೆ ಗೊಂದಲವಿದೆ. ಹಿತೈಷಿಗಳ ನೀವು ನನಗೆ ಯಾವ ಕ್ಷೇತ್ರವನ್ನು ಆಯ್ದುಕೊಂಡರೇ ಉತ್ತಮ ಎನ್ನುವುದನ್ನು ತಿಳಿಸಿ. ಗಮನಿಸಿ ನನಗೆ ಬ್ರಹ್ಮಾಂಡ ಜ್ಯೋತಿಷದ ಬಗ್ಗೆ ನಂಬಿಕೆಯಿಲ್ಲ.ನಿಮ್ಮ ಸಲಹೆ ಸೂಚನೆಯಲ್ಲಿ ವಿಶ್ವಾಸವಿದೆ.
ನನ್ನ ಹುಡುಕಿ ಬಂದ ಅವಕಾಶ ಹೀಗಿದೆ.
* ವರದಿಗಾರಿಕೆಯಲ್ಲಿ ಇಷ್ಟವಿರುವ ನನಗೆ ಕನ್ನಡ ಪತ್ರಿಕೆಯೊಂದರ ಗ್ರಾಮಾಂತರ ವರದಿಗಾರನಾಗಿ ಕೆಲಸ ಮಾಡುವ ಕರೆ ಬಂದಿದೆ
* ಫೋಟೊಗ್ರಾಫ್ನಲ್ಲಿ ಆಸಕ್ತಿಯಿರುವ ನನಗೆ ಅದನ್ನು ಮುಂದುವರೆಸುವಂತೆ ಹೇಳುವ ನನ್ನ ಸ್ಟುಡೀಯೋ ಮಿತ್ರರ ಮಾತು ಕೆಲವೊಮ್ಮೆ ಸರಿಯೆನಿಸಿದೆ.
* ಈಗಾಗಲೇ ನಾನು ಮಾಡುತ್ತಿರುವ ಪಾಟರ್್ ಟೈಂ ಜಾಬ್( ಮಾಕರ್ೆಟಿಂಗ್ ಮೆಂಬರ್)ನ್ನು ಫುಲ್ ಟೈಂ ಮಾಡು ಎನ್ನುವುದು ನನ್ನ ತಂದೆಯ ಅನಿಸಿಕೆ. ಈ ಉದ್ಯೋಗದಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದೇನೆ.
* ಇವೆಲ್ಲದರ ನಡುವೆ ಬಿ.ಎ ಆದ್ ಮೇಲೆ ಬರುವ ಉತ್ತಮ ಅವಕಾಶಗಳನ್ನು ಮಿಸ್ ಮಾಡುವ ಮನಸ್ಸು ನನ್ನದಲ್ಲ.
ಈಗ ನೀವೆ ಹೇಳಿ ಇದರಲ್ಲಿ ಯಾವುದು ಉತ್ತಮ ಅಥವಾ ಇನ್ನು ಬೇರೆ ಅವಕಾಶಕ್ಕೆ ಕಾಯುವುದು ಉತ್ತಮವೋ ಎಂದು.......................................
ಕಡೆಗೊಂದು ವಿನಂತಿ ದಯವಿಟ್ಟು ಬಿ.ಎ ನಾ? ಅಂತ ಯಾರನ್ನು ಹೀಯಾಳಿಸಬೇಡಿ...ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ....ಇತರ ಕೋಸರ್್ಗಳಿ ಸರಿಸಾಟಿಯಾಗಬಲ್ಲ .ಅನಂತ ಅವಕಾಶಗಳನ್ನು ನೀಡಬಲ್ಲ ಕೋಸರ್್ ಬಿ.ಎ.
ಇಂತೀ ನಿಮ್ಮ ಮಿತ್ರ

ಶನಿವಾರ, ಮೇ 21, 2011

ಲೈಫ್ ಇಷ್ಟಾ(ಇಷ್ಟೆ)ನೆ...

ಇತ್ತೀಚೆಗೆ ಬ್ಲಾಗ್ ಓದುವ ಚಟ ಹೆಚ್ಚಾಗಿದೆ...ಎಕ್ಸಾಮ್ಗೆ ಓದೊದು ಕಡಿಮೆಯಾಗಿದೆ.
ನನ್ನ ಬ್ಲಾಗ್ಗೆ ಬರೆಯೋದು ಕಡಿಮೆಯಾಗಿದೆ...ಎಕ್ಸಾಮ್ ಬರೆಯೋದು ಹೆಚ್ಚಾಗಿದೆ ....

ಬುಧವಾರ, ಮೇ 4, 2011

ಶೀ...ಹಾಳಾದ ನೀರು..




















ಕಾರ್ಯಕ್ರಮ ಒಂದಕ್ಕೆ ಮಕ್ಕಳ ಜೊತೆ ಹೋಗಿದ್ದಾಗ 'ಸುಮ್ಮನೆ' ನಗು ತರಿಸಿದ ಇಬ್ಬರು ತುಂಟ ಹುಡುಗರ ಮಾತುಗಳು ಹೀಗಿದೆ
ಹುಡುಗ 1: ನಮ್ಮೂರಿನ ಸಿಯಾಳದ ನೀರು ತುಂಬಾ ಸಿಹಿ ಗೊತ್ತಾ?
ಹುಡುಗ 2; ಶೀ... ಹಾಳಾದ ನೀರು ಸಿಹಿಯೇ?









ಸೋಮವಾರ, ಮೇ 2, 2011

ಬೇಗ ಖ(ಕ)೦ಡು ಬರಲಿ...

'ಬೇಗ ಖಂಡು ಬರಲಿ'...ಕನ್ನಡಪ್ರಭದಲ್ಲಿ 1.5.2011ರ ಮುಖಪುಟದಲ್ಲಿ ಕಂಡುಬಂದ ಹೆಡ್ಲೈನ್ ಇದು. ನನಗೆ ಇಷ್ಟವಾಯಿತು.ಆದರೆ ನನ್ನ ಬದಿಯಲ್ಲಿ ಪೇಪರ್ ಓದುತ್ತಿದ್ದ ತಂಗಿಗೆ ಕಂಫ್ಯೂಸ್ ಆಯಿತು.....'ಬೇಗ ಕಂಡು ಬರಲಿ' ಅಗಬೇಕಿತ್ತು ಎನ್ನುವುದು ಅವಳ ವಾದ... ಅದನ್ನು ಸರಿಯಾಗಿ ಓದು ಎನ್ನುವವರೆಗೂ ಅವಳ ವಾದ ನಿಲ್ಲಲಿಲ್ಲ. ಹಾಗೇ 'ಸುಮ್ಮನೆ' ಸುತ್ತಾಡಿದ ಅವಳ ವಿಚಾರವೋ ಇಷ್ಟವಾಯಿತು ...

ಭಾನುವಾರ, ಮೇ 1, 2011

ಚುಂ'ಬಿಸಿಲು'




ಇಣಕುತಿದ್ದಾನೆ ಸೂರ್ಯ
ಧರೆಯ ಚುಂಬಿಸಲು
ಹಚ್ಚ ಹಸುರಿನ ಮಧ್ಯೆ
ಅದಕ್ಕಾಗಿ ಹೊಚ್ಚ ಹೊಸ
ಹೊಂಬಿಸಿಲು
( ಈಕನಸು.com ನಲ್ಲಿ photo ಒಂದಕ್ಕೆ ಕಮೆ೦ಟು ಮಾಡುವಾಗ 'ಸುಮ್ಮನೆ' ತೇಲಿ ಹೋದ ಸಾಲು)