
ನಾವು ಎಸ್.ಎಸ್.ಎಲ್.ಸಿ. ,ಪಿ.ಯು.ಸಿ ಆದ್ ಮೇಲೆ ಮುಂದೇನು ಮಾಡ್ಬೇಕು ಎಂಬುದನ್ನು ನೀವು ಕೇಳಿದ್ದೇವೆ. ಈ ಮನುಷ್ಯನಿಗೆ ಸರಿಯಿಲ್ಲವೂ? ಎಂದು ನಿಮಗೆ ಅನ್ನಿಸಬಹುದು, ಸೆಕೆಂಡ್ ಆದ್ರೆ ಇನ್ನು ಫೈನಲ್ ಇಯರ್ ಪಾಸ್ ಮಾಡು ಮಾರಾಯ ಅಂತನ್ನೂ ನೀವು ಹೇಳ ಬಹುದು.....ನನ್ನ ಕಾಡುತ್ತಿರುವ ಪ್ರಶ್ನೆ ಒಂದೇ 'ಡಿಗ್ರಿ ಆದ್ ಮೇಲೆ ಏನು? ಅಂತ
ಪಾಪಾ ಹುಡುಗ ಬಿ.ಎ ತೆಗೊಂಡು ಸೋತು ಹೋದ ಎಂದು ನೀವು ಯೋಚಿಸಿದ್ದರೆ ಅದು ಖಂಡಿತ ತಪ್ಪು.
ಅವಕಾಶಗಳನ್ನು ಉಪಯೋಗಿಸಿದರೇ ಅವಕಾಶ ಮೇಲೆ ಅವಕಾಶ ಬರುತ್ತೆ ಎನ್ನುವುದಕ್ಕೆ ನಾನೇ ಸಾಕ್ಷಿ
ಅದರಿಂದ ಬಂದ ಅವಕಾಶದಲ್ಲಿ ಯಾವುದನ್ನು ಉಪಯೋಗಿಸಲಿ ಎಂಬುದರ ಬಗ್ಗೆ ಗೊಂದಲವಿದೆ. ಹಿತೈಷಿಗಳ ನೀವು ನನಗೆ ಯಾವ ಕ್ಷೇತ್ರವನ್ನು ಆಯ್ದುಕೊಂಡರೇ ಉತ್ತಮ ಎನ್ನುವುದನ್ನು ತಿಳಿಸಿ. ಗಮನಿಸಿ ನನಗೆ ಬ್ರಹ್ಮಾಂಡ ಜ್ಯೋತಿಷದ ಬಗ್ಗೆ ನಂಬಿಕೆಯಿಲ್ಲ.ನಿಮ್ಮ ಸಲಹೆ ಸೂಚನೆಯಲ್ಲಿ ವಿಶ್ವಾಸವಿದೆ.
ನನ್ನ ಹುಡುಕಿ ಬಂದ ಅವಕಾಶ ಹೀಗಿದೆ.
* ವರದಿಗಾರಿಕೆಯಲ್ಲಿ ಇಷ್ಟವಿರುವ ನನಗೆ ಕನ್ನಡ ಪತ್ರಿಕೆಯೊಂದರ ಗ್ರಾಮಾಂತರ ವರದಿಗಾರನಾಗಿ ಕೆಲಸ ಮಾಡುವ ಕರೆ ಬಂದಿದೆ
* ಫೋಟೊಗ್ರಾಫ್ನಲ್ಲಿ ಆಸಕ್ತಿಯಿರುವ ನನಗೆ ಅದನ್ನು ಮುಂದುವರೆಸುವಂತೆ ಹೇಳುವ ನನ್ನ ಸ್ಟುಡೀಯೋ ಮಿತ್ರರ ಮಾತು ಕೆಲವೊಮ್ಮೆ ಸರಿಯೆನಿಸಿದೆ.
* ಈಗಾಗಲೇ ನಾನು ಮಾಡುತ್ತಿರುವ ಪಾಟರ್್ ಟೈಂ ಜಾಬ್( ಮಾಕರ್ೆಟಿಂಗ್ ಮೆಂಬರ್)ನ್ನು ಫುಲ್ ಟೈಂ ಮಾಡು ಎನ್ನುವುದು ನನ್ನ ತಂದೆಯ ಅನಿಸಿಕೆ. ಈ ಉದ್ಯೋಗದಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದೇನೆ.
* ಇವೆಲ್ಲದರ ನಡುವೆ ಬಿ.ಎ ಆದ್ ಮೇಲೆ ಬರುವ ಉತ್ತಮ ಅವಕಾಶಗಳನ್ನು ಮಿಸ್ ಮಾಡುವ ಮನಸ್ಸು ನನ್ನದಲ್ಲ.
ಈಗ ನೀವೆ ಹೇಳಿ ಇದರಲ್ಲಿ ಯಾವುದು ಉತ್ತಮ ಅಥವಾ ಇನ್ನು ಬೇರೆ ಅವಕಾಶಕ್ಕೆ ಕಾಯುವುದು ಉತ್ತಮವೋ ಎಂದು.......................................
ಕಡೆಗೊಂದು ವಿನಂತಿ ದಯವಿಟ್ಟು ಬಿ.ಎ ನಾ? ಅಂತ ಯಾರನ್ನು ಹೀಯಾಳಿಸಬೇಡಿ...ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ....ಇತರ ಕೋಸರ್್ಗಳಿ ಸರಿಸಾಟಿಯಾಗಬಲ್ಲ .ಅನಂತ ಅವಕಾಶಗಳನ್ನು ನೀಡಬಲ್ಲ ಕೋಸರ್್ ಬಿ.ಎ.
ಇಂತೀ ನಿಮ್ಮ ಮಿತ್ರ
ಯಶೋಧರ.. ಈಗ್ಲೇ ಇದೇ ಕೆಲಸ ಅಂತ ನಿರ್ಧಾರಕ್ಕೆ ಬರ್ ಬೇಡ...
ಪ್ರತ್ಯುತ್ತರಅಳಿಸಿಬಿ.ಎ ಅಂತಿಮವರ್ಷದಲ್ಲಿ ಉದ್ಯೋಗಮೇಳದಲ್ಲಿ ಇದಕ್ಕಿಂತ ಉತ್ತಮ ಕೆಲಸ ಸಿಗಬಹುದು... ಈಗ ಪಾರ್ಟೈಮ್ ಮಾಡೊದು ಒಲ್ಲೆದು... ನಾಳೆಯ ದಿನ ನಮ್ಮದು...
ಉತ್ತಮ ಸಲಹೆ....ನನ್ನ ಜೀವನದ ಬಗ್ಗೆ ಆತುರದ ನಿಧಾ೯ರ ಮಾಡುತ್ತಿರುವನೋ...ಎಂದು ಅನಿಸ್ತ ಉ೦ಟು
ಪ್ರತ್ಯುತ್ತರಅಳಿಸಿ